ದಿನದ ಅಪರಾಧಗಳ ಪಕ್ಷಿನೋಟ 23 ನೇ ಮಾರ್ಚ್ 2017

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:23-03-2017 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ರಸ್ತೆ ಅಪಘಾತ:

ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ-75 ರ ಜಮ್ಮನಹಳ್ಳಿ ಗೇಟ್ ಸಮೀಪ ಕೃತ್ಯ ಸಂಭವಿಸಿರುತ್ತದೆ. ಮುಳಬಾಗಲು ತಾಲ್ಲೂಕು ವಿ.ಗುಟ್ಟಹಳ್ಳಿ ಗ್ರಾಮದ ವಾಸಿಯಾದ ತಿಪ್ಪಣ್ಣ ರವರು ನೀಡಿದ ದೂರು ಏನೆಂದರೆ, ಪಿರ್ಯಾದಿ ಮತ್ತು ಅವರ ಗ್ರಾಮದ ವಾಸಿಗಳಾದ ವೆಂಕಟರಾಮಪ್ಪ, ಮುನಿವೆಂಕಟಮ್ಮ, ನಾರೆಮ್ಮ ಮತ್ತು ರಾಜಮ್ಮ ರವರು ದಿನಾಂಕ:22-03-2017 ರಂದು ಮುಳಬಾಗಿಲಿಗೆ ಗಾರೆ ಕೆಲಸಬಂದು ಕೆಲಸ ಮುಗಿಸಿಕೊಂಡು  ಸಂಜೆ 7-30 ಗಂಟೆಯಲ್ಲಿ ಮುಳಬಾಗಿಲು ಟೌನಿನ ಅಂಬೇಡ್ಕರ್‌‌ ಸರ್ಕಲ್‌ನಲ್ಲಿ ಊರಿಗೆ ಹೋಗಲು ಕಾಯುತ್ತಿದ್ದಾಗ ಒಂದು ಆಟೋ ಸಂಖ್ಯೆ ಕೆಎ.08.6332 ಬಂದಿದ್ದು, ಅದರಲ್ಲಿ ಕುಳಿತುಕೊಂಡು ಊರಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-75 ರಸ್ತೆಯಲ್ಲಿ ಜಮ್ಮನಹಳ್ಳಿ ಗೇಟ್‌ ಸಮೀಪ ಹೋಗುತ್ತಿದ್ದಾಗ ಮುಳಬಾಗಲು ಕಡೆಯಿಂದ ಕೋಲಾರ ಕಡೆಗೆ ಹೋಗಲು ಬಂದ ಒಂದು ಟಾಟಾ ಟರ್ಬೋ ಗೂಡ್ಸ್‌‌  ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋವಿನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದರಿಂದ ಪಿರ್ಯಾದಿ ತಲೆಯ ಬಲಭಾಗ, ಹಿಂಭಾಗ, ಎಡ ಭುಜಕ್ಕೆ, ಬಲಕಾಲಿನ ತೊಡೆಗೆ ಗಾಯಗಳಾಗಿದ್ದು, ವೆಂಕಟರಾಮಪ್ಪನಿಗೆ ಬಲಭಾಗದ ಹಣೆಗೆ, ಎಡ ಸೊಂಟಕ್ಕೆ ಗಾಯಗಳಾಗಿದ್ದು, ಮುನಿವೆಂಕಟಮ್ಮಳಿಗೆ  ಎಡ ಮುಂಗೈ ಬಳಿ, ಬಲಕಾಲಿನ ತೊಡೆಗೆ ಗಾಯಗಳಾಗಿದ್ದು, ನಾರೆಮ್ಮ ರವರಿಗೆ ಬಲ ಮತ್ತು ಎಡಕಾಲಿನ ಮೊಣಕಾಲಿನ ಬಳಿ ಹಾಗೂ ರಾಜಮ್ಮ ರವರಿಗೆ ಎಡ ತೊಡೆಗೆ ಗಾಯಗಳಾಗಿರುತ್ತೆ. ಆಟೋ ಚಾಲಕ ನಾಗರಾಜ ರವರಿಗೆ ಬಲಕಾಲಿನ ತೊಡೆಗೆ, ಬಲ ಕೆನ್ನೆಗೆ, ಎದೆಗೆ ಬಲಕಣ್ಣಿನ ಉಬ್ಬಿಗೆ ಕತ್ತಿಗೆ ಎಡ ಭಾಗದ ತಲೆಗೆ ಗಾಯಗಳಾಗಿರುತ್ತವೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

 

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 23 ನೇ ಮಾರ್ಚ್ 2017

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:23-03-2017 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಅಪ್ರಾಪ್ತ ಬಾಲಕಿಯ ಅಪಹರಣ:

ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ನರಸಾಪುರ ಹೋಬಳಿ ಕುರ್ಕಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ನರಸಾಪುರ ಹೋಬಳಿ ಕುರ್ಕಿ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ವಾಸಿಗಳಾದ ನಾಗಭೂಷಣ್, ಶಶಿ, ಮನೋಜ್ ಮತ್ತು ಅಯಾಜ್ ಎಂಬುವರು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.

ಬಾಲಕಿ ಕಾಣೆಯಾಗಿರುವ ಬಗ್ಗೆ:

ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಗೌರಿಪೇಟೆಯ ಕಂಬಳಿ ಮಠ ರಸ್ತೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ನಗರದ ಗೌರಿಪೇಟೆಯ ಕಂಬಳಿ ಮಠ ರಸ್ತೆ ವಾಸಿಯಾದ ಸಿ.ಎನ್.ಮುನಿಯಪ್ಪ ರವರ ಸಾಕು ಮಗಳಾದ 17 ವರ್ಷದ ಮೌನಿಕಾ ರವರು ಕೆ.ಜೆ.ಇಂಟರ್ ನ್ಯಾಷನಲ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗಮಾಡುತ್ತಿದ್ದು, ದಿನಾಂಕ:15-03-2016 ರಂದು ಸಂಜೆ 4-00 ಗಂಟೆಯಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯ ಪ್ರವೇಶ ಪತ್ರ ತೆಗೆದುಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

 

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 20 ನೇ ಫೆಬ್ರವರಿ 2017

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:25-01-2017 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಪ್ರಶಾಂತ ನಗರದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ನಗರದ ಪ್ರಶಾಂತ ನಗರದ ವಾಸಿಯಾದ ಪಿ.ನಾಗರಾಜ ರವರ ಮಗಳಾದ 19 ವರ್ಷದ ಪ್ರಿಯಾಂಕ ರವರು ದಿನಾಂಕ:16-02-2017 ರಂದು ರಾತ್ರಿ 7-30 ಗಂಟೆಯಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 25 ನೇ ಜನವರಿ 2017

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:25-01-2017 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ವಾಹನ ಕಳುವು

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.ಕೋಲಾರ ನಗರದ ಕೀಲುಕೋಟೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ನಗರದ ಕೀಲುಕೋಟೆ ವಾಸಯಾದ ಮಂಜುನಾಥ್ ಸಿಂಗ್ ರವರು ದಿನಾಂಕ:       23-01-2017 ರಂದು ರಾತ್ರಿ 10-00 ಗಂಟೆಯಲ್ಲಿ ಅವರ ಬಾಭಬತ್ತು ಟೊಯೋಟಾ ಕ್ವಾಲಿಸ್ ವಾಹನವನ್ನು ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದು, ನಂತರ ದಿನಾಂಕ:24-01-2017 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ಟೊಯೋಟಾ ಕ್ವಾಲಿಸ್ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ.2,000,00-00 ಗಳಾಗಿರುತ್ತದೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಹುಲ್ಲಂಕಲ್ಲು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಬೈರಂಡಹಳ್ಳಿ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ರವರ ಮಗಳಾದ 28 ವರ್ಷದ ಕವಿತ ರವರು ದಿನಾಂಕ:    22-01-2017 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಆಕೆಯ ಗಂಡನ ಮನೆ ಹುಲ್ಲುಂಕಲ್ಲು ಗ್ರಾಮದಿಂದ ಕಾಣೆಯಾಗಿರುವುದಾಗಿ ದೂರು ನೀಡಿರುವುದಾಗಿರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

 

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 24 ನೇ ಜನವರಿ 2017

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:24-01-2017 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ-75 ರ ಮಡೇರಹಳ್ಳಿ ಗ್ರಾಮದ ಸಮೀಪ ಇರುವ ಪಂಪ್ ಹೌಸ್ ಸಮೀಪ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ಕೂಟೇರಿ ಮಜರಾ ಲಕ್ಷ್ಮೀಸಾಗರ ಗ್ರಾಮದ ವಾಸಿಯಾದ ನಾಗರಾಜ ರವರ ತಂದೆಯಾದ ವೆಂಕಟಸ್ವಾಮಿ ರವರು ಕೋಲಾರ ತಾಲ್ಲೂಕು ಮಡೇರಹಳ್ಳಿ ಗ್ರಾಮದ ಸಮೀಪ ಿರುವ ಕೋಲಾರ ನಗರ ಸಭೆಗೆ ಸೇರಿದ ಪಂಪ್ ಹೌಸ್ ನಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ:23-01-2017 ರಂದು ಸಂಜೆ 5 ಗಂಟೆಯಲ್ಲಿ ಕೊಳವೆ ಬಾವಿಯ ಮೋಟಾರ್ ಪಂಪ್ ಅನ್ನು ಚಾಲನೆ ಮಾಡುವ ಸಲುವಾಗಿ ಮಡೇರಹಳ್ಳಿ ಪಂಪ್ ಹೌಸ್ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-75 ರಸ್ತೆಯ ಎಡ ಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ಒಂದು ಅಪರಿಚಿತ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗತೂಕತೆಯಿಂದ ಚಾಲನೆಮಾಡಿಕೊಂಡು ಬಂದು ಪಿರ್ಯಾದಿ ತಂದೆಯಾದ ವೆಂಕಟಸ್ವಾಮಿ ರರಿಗೆ ಡಿಕ್ಕಿಹೊಡೆಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟುಹೋದ ಪರಿಣಾಮ ಪಿರ್ಯಾದಿ ತಂದೆಯವರ ತಲೆಗೆ ತೀವ್ರ ತರಹದ ರಕ್ತಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಕೊಲೆ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ನಂದಂಬಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ನಂದಂಬಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ಸುಶೀಲಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಏನೆಂದರೆ  ದಿನಾಂಕ: 23-01-2017 ರಂದು  ಮದ್ಯಾಹ್ನ 3-00 ಗಂಟೆಯಲ್ಲಿ ಅದೆ ಗ್ರಾಮದ ವಾಸಿಗಳಾದ ರಘುಪತಿ, ವೆಂಕಟೇಶ್‌, ಚಿನ್ನಪ್ಪ, ಮಂಜುನಾಥ್ ರವರುಗಳು ಪಿರ್ಯಾದಿಯ ಬಾಬತ್ತು ಸರ್ವೇ ನಂ: 10/1 ರ ಜಮೀನಿನಲ್ಲಿ ಬೆಳೆದಿದ್ದ  ನೀಲಗಿರಿ ಮರಗಳನ್ನು ಅಕ್ರಮವಾಗಿ ಕಟಾವು ಮಾಡುತ್ತಿದ್ದು, ಈ ವಿಚಾರ ತಿಳಿದು ಪಿರ್ಯಾದಿ ಹಾಗೂ ಆಕೆಯ ಗಂಡ ಮುನಿವೆಂಕಟಪ್ಪ ರವರುಗಳು ಗ್ರಾಮದ ಹಿರಿಯರೊಂದಿಗೆ  ಕೇಳಲು ಹೋದಾಗ   ಮೇಲ್ಕಂಡ ಆರೋಪಿಗಳು  ವಿನಾಕಾರಣ ಜಗಳ ತೆಗೆದು ಪಿರ್ಯಾದಿ ಗಂಡನನ್ನು ಸಾಯಿಸುವ ಉದ್ದೇಶದಿಮದ  ಕೈಗಳಿಂದ ಹೊಡೆದು ಹಲ್ಲೆ ಮಾಡಿ ಕುತ್ತಿಗೆಗೆ ಹಗ್ಗ  ಬಿಗಿದು ಎಳೆದಾಡಿದಾಗ ಪಿರ್ಯಾದಿ ಗಂಡ ಪ್ರಜ್ಷೆ ತಪ್ಪಿ ಹೋಗಿದ್ದು ಚಿಕಿತ್ಸೆಗಾಗಿ ವಾಹನದಲ್ಲಿ ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ  ಮುನಿವೆಂಕಟಪ್ಪ ರವರು ಮೃತಪಟ್ಟಿರುತ್ತಾರೆ.

ಎ.ಟಿ.ಎಂ. ಕೋಡ್ ಪಡೆದು ವಂಚಿಸಿರುವ ಬಗ್ಗೆ:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎ.ಟಿ.ಎಂ. ಕೋಡ್ ಪಡೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಡೂಂಲೈಟ್ ಸರ್ಕಲ್ ಬಳಿ ಇರುವ ಕೆನರಾ ಬ್ಯಾಂಕ್ ಬಳಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ನಗರದ ಪ್ರಶಾಂತ್ ನಗರದ ವಾಸಿಯಾದ ರಿಜ್ವಾನ್ ಖಾಜಿ ರವರು ನೀಡಿದ ದೂರು ಏನೆಂದರೆ, ದಿನಾಂಕ:19-01-2017 ರಂದು ಬೆಳಿಗ್ಗೆ  10-29 ಗಂಟೆಯಲ್ಲಿ  +917485878144  ನಂಬರ್‌ನಿಂದ ಪಿರ್ಯಾದಿ ನಂಬರ್ ಗೆ ಪೋನ್ ಮಾಡಿ  ನಾವು ಕೆನರಾ ಬ್ಯಾಂಕ್‌  ಮ್ಯಾನೇಜರ್‌  ನಿಮ್ಮ ಎ.ಟಿ.ಎಂ ಕಾರ್ಡ್‌  ಲ್ಯಾಪ್ಸ್‌ ಆಗಿದೆ  ಆಕ್ವಿವೇಟ್ ಮಾಡಲು  ಎ.ಟಿ.ಎಂ ಕಾರ್ಡ್‌ ನಂಬರ್  ಕೇಳಿದ್ದು  ಅದರಂತೆ ಪಿರ್ಯಾದಿ ಎ.ಟಿ.ಎಂ  ನಂಬರ್ ಕೊಟ್ಟಿದ್ದು  ಮೊಬೈಲ್‌ಗೆ ಬಂದಿರುವ ಓ.ಟಿ.ಪಿ ನಂಬರ್  ಕೊಡುವಂತೆ ಕೇಳಿದ್ದು ಅದರಂತೆ ಪಿರ್ಯಾದಿ ಆತನ ಮೊಬೈಲ್‌ಗೆ ಬಂದಿದ್ದ 9999  ಓ.ಟಿ.ಪಿ ನಂಬರ್‌ನ್ನು ಕೊಟ್ಟಿದ್ದು  ಆರೋಪಿಗಳು ಪಿರ್ಯಾದಿ ಆಕೌಂಟ್‌ನಲ್ಲಿದ್ದ ರೂ.1,01.909-00ಗಳನ್ನು ಡ್ರಾ ಮಾಡಿಕೊಂಡು ವಂಚನೆ ಮಾಡಿರುವುದಾಗಿರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 08 ನೇ ಡಿಸೆಂಬರ್ 2016

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:08-12-2016 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ದ್ವಿಚಕ್ರ ವಾಹನ ಕಳುವು:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಕಠಾರಿಪಾಳ್ಯದಲ್ಲಿರುವ ಮಂಜು ಹೋಟೆಲ್ ಮುಂಭಾಗ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ಟಮಕ ನಿವಾಸಿಯಾದ ಬಿ.ಮಲ್ಲಿಕಾರ್ಜುನರೆಡ್ಡಿ ರವರು ದಿನಾಂಕ:06-12-2016 ರಂದು ರಾತ್ರಿ 8-00 ಗಂಟೆಯಲ್ಲಿ ಕೋಲಾರ ನಗರದ ಕಠಾರಿಪಾಳ್ಯದಲ್ಲಿರುವ ಮಂಜು ಹೋಟೆಲ್ ಮುಂಭಾಗ ಕೆ.ಟಿ.ಎಂ. ಡ್ಯೂಕ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಹೋಟೆಲ್ ಗೆ ಹೋಗಿ ತಿಂಡಿ ತಿಂದುಕೊಂಡು ಅರ್ಧಗಂಟೆ ಬಿಟ್ಟು ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

 

 

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

 

| ನಿಮ್ಮ ಟಿಪ್ಪಣಿ ಬರೆಯಿರಿ

ದಿನದ ಅಪರಾಧಗಳ ಪಕ್ಷಿನೋಟ 05 ನೇ ಡಿಸೆಂಬರ್ 2016

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:05-12-2016 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ-75ರ ನರಸಾಪುರ ಬ್ರಿಡ್ಜ್ ಬಳಿ ಕೃತ್ಯ ಸಂಭವಿಸಿರುತ್ತದೆ. ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೋಬಳಿ ಸಂಗನಹಳ್ಳಿ ಗ್ರಾಮದ ವಾಸಿಯಾದ ವೆಂಕಟೇಶಪ್ಪ ರವರು ನೀಡಿದ ದೂರು ಏನೆಂದರೆ, ಪಿರ್ಯಾದಿ ತಂದೆಯಾದ 58 ವರ್ಷದ ನಂಜುಂಡಪ್ಪ ಮತ್ತು ಪಿರ್ಯಾದಿ ತಾಯಿ ತಮ್ಮನಾದ  ಚೋಳಘಟ್ಟ ಗ್ರಾಮದ ವೆಂಕಟೇಶಪ್ಪ ರವರು ದಿನಾಂಕ:04-12-2016 ರಂದು ಬೆಳಿಗ್ಗೆ  10-00 ಗಂಟೆಗೆ  ಮನೆ ಬಿಟ್ಟು ನರಸಾಪುರ ಹೋಬಳಿ ಚೌಡದೇನಹಳ್ಳಿ ಗ್ರಾಮಕ್ಕೆ ಹೋಗಲು ಕೋಲಾರಕ್ಕೆ ಹೋಗಿ ಕೋಲಾರದಿಂದ  ನರಸಾಪುರಕ್ಕೆ ಹೋಗಲು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ   ಸಂಜೆ 4-00 ಗಂಟೆಗೆ  ನರಸಾಪುರ ಬ್ರಿಡ್ಜ್ ಸಮೀಪ ಹೋಗುತ್ತಿದ್ದಾಗ  ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನರಸಾಪುರ ಕಡೆಗೆ ತಿರುಗಿಸಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಸ್ಸಿನಲ್ಲಿದ್ದ  ಪಿರ್ಯಾದಿ ತಂದೆ ನಂಜುಂಡಪ್ಪ ರವರಿಗೆ ಎದೆ ಮತ್ತು ಇತರೇ ಕಡೆಗಳಲ್ಲಿ ಒತ್ತಡದ ಗಾಯಗಳು ಆಗಿದ್ದು  ಮತ್ತು ಬಸ್ಸಿನಲ್ಲಿದ್ದ ಇತರೇ ಪ್ರಯಾಣಿಕರಿಗೆ ಗಾಯಗಳಾಗಿದ್ದು 108 ಆಂಬುಲೆನ್ಸ್ ನಲ್ಲಿ  ಕೋಲಾರದ  ಆರ್.ಎಲ್.ಜಾಲಪ್ಪ ಆಸ್ವತ್ರೆಗೆ  ಕರೆದುಕೊಂಡು ಹೋಗಿ  ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಂಜುಂಡಪ್ಪ ರವರು ಮೈತಪಟ್ಟಿರುತ್ತಾರೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಲು ಟೌನಿನಲ್ಲಿ ಕೃತ್ಯ ಸಂಭವಿಸಿರುತ್ತದೆ. ಮುಳಬಾಗಲು ತಾಲ್ಲೂಕು ಬೈರಕೂರು ಹೋಬಳಿ ಬಿ.ಕುರುಬರಹಳ್ಳಿ ಗ್ರಾಮದ ವಾಸಿಯಾದ ರೆಡ್ಡಪ್ಪ ರವರ ಮಗಳಾದ 20 ವರ್ಷದ ಆರ್.ಅಂಬಿಕಾ ರವರು ಮಳಬಾಗಲ್ ಟೌನ್‌ನ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗಮಾಡುತ್ತಿದ್ದು, ದಿನಾಂಕ:25-11-2016 ರಂದು ಬಿ.ಕಾಂ.ಪರೀಕ್ಷೆ ಬರೆಯಲು ಮುಳಬಾಗಲಿಗೆ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.  ಈ ಬಗ್ಗೆ ಅದೇ ಗ್ರಾಮದ ವಾಸಿಯಾದ ಸತೀಶ ರವರ ಮೇಲೆ ಅನುಮಾನವಿರುವುದಾಗಿ ದೂರು ನೀಡಿರುತ್ತಾರೆ.

ದ್ವಿಚಕ್ರ ವಾಹನ ಕಳುವು:

ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಲು ಟೌನಿನ ನೇತಾಜಿ ಆಟದ ಮೈದಾನದ ಬಳಿ ಕೃತ್ಯ ಸಂಭವಿಸಿರುತ್ತದೆ.ಬಂಗಾರಪೇಟೆ ನ್ಯೂ ಟೌನ್ ವಾಸಿಯಾದ ಸಿ.ಬಿ.ಜಗದೀಶ ರವರು ದಿನಾಂಕ:30-10-2016 ರಂದು ಮುಳಬಾಗಿಲು ಟೌನ್ ನೇತಾಜಿ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಹೀರೊ ಹೊಂಡಾ ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ 09-00 ಗಂಟೆಗೆ ಬಂದು ಮೈದಾನದ ಬಳಿ ನಿಲ್ಲಿಸಿ ವ್ಯಾಪಾರ ಮಾಡಿಕೊಂಡು ರಾತ್ರಿ 09:00 ಗಂಟೆಯಲ್ಲಿ ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ದ್ವಿಚಕ್ರ ವಾಹನದ ಬೆಲೆಯ  ರೂ.19,000-00 ಗಳಾಗಿರುತ್ತದೆ.

 ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆ ಸಂಪರ್ಕಿಸಬಹುದಾಗಿರುತ್ತದೆ.

 

| ನಿಮ್ಮ ಟಿಪ್ಪಣಿ ಬರೆಯಿರಿ